Thursday, November 22, 2012

ತ.ರಾ.ಸು.: ದುರ್ಗಾಸ್ತಮಾನ (ಕಾದಂಬರಿ) (1982)


`ದುರ್ಗಾಸ್ತಮಾನ’ ಓದುವುದು ತುಂಬಾ ಸಂತೋಷದಾಯಕವಾದ, ಅಷ್ಟೇ ಫಲಶ್ರೀಮಂತವಾದ ಅನುಭವ. ಕಾರಣವೆಂದರೆ ಅಂತಃಕರಣ, ಬುದ್ಧಿಶಕ್ತಿಗಳೆರಡೂ ಸದಾ ಎಚ್ಚರಿಕೆಯಿಂದಿರುವಂತೆ ಮಾಡುತ್ತವೆ. ಅಂತಃಕರಣಕ್ಕೆ ರೋಮಾಂಚನವಾಗುವ ಅನುಭವಗಳೊಂದಿಗೆ ಅತ್ಯಂತ ಸೂಕ್ಷ್ಮ ರಾಜಕಾರಣದ ಬೌದ್ಧಿಕ ಸಮಸ್ಯೆಗಳು ವ್ಯಕ್ತಿ-ಸಮಷ್ಟಿ ಜೀವನಗಳು ಹಾಸುಹೊಕ್ಕಾಗಿ ಹೆಣೆದುಕೊಳ್ಳುವಾಗ ಉದ್ಭವಿಸುವ ಧರ್ಮಸೂಕ್ಷ್ಮಗಳು - ಎಲ್ಲ ಸೇರಿ ಇದನ್ನೊಂದು ಅಪೂರ್ವ ಕೃತಿಯನ್ನಾಗಿ ಮಾಡಿವೆ.
-ಎಲ್.ಎಸ್. ಶೇಷಗಿರಿರಾವ್


‘ದುರ್ಗಾಸ್ತಮಾನ’ ವರ್ಷದ ಶ್ರೇಷ್ಠ ಕಾದಂಬರಿ ಅಷ್ಟೇ ಅಲ್ಲ; ಕನ್ನಡದ ಒಂದು ಶ್ರೇಷ್ಠ ಪುಸ್ತಕವೂ ಹೌದು. ಈ ಐತಿಹಾಸಿಕ ಕಾದಂಬರಿಯಲ್ಲಿ ತರಾಸು ತೋರಿರುವ ರಾಜಕೀಯ ವ್ಯವಹಾರಗಳ ಕುಶಲತೆ ತುಂಬ ಅಪರೂಪವಾದದ್ದು. ಕಾವ್ಯಮಯ ಭಾಷೆಯಲ್ಲಿ ಬದುಕಿನ ವಾಸ್ತವಿಕತೆಗಳನ್ನು ಪರಿಣಾಮಕಾರಿಯಾಗಿ ಕಡೆದು ನಿಲ್ಲಿಸುವ ಶಕ್ತಿ ತರಾಸು ಅವರಲ್ಲಿ ಅದ್ವಿತೀಯವಾದುದು. ತಮ್ಮ ಅನಾರೋಗ್ಯದ ತೀವ್ರ ಪರಿಸ್ಥಿತಿಯಲ್ಲಿ ಇಂಥದೊಂದು ಕಾದಂಬರಿಯನ್ನು ಬರೆದು ತರಾಸು ಒಂದು ಪವಾಡವನ್ನು ತೋರಿದ್ದಾರೆ.
-ಡಾ||ಹಾ.ಮಾ.ನಾಯಕ